Sunday, November 29, 2020

ಮoತ್ರಾಲಯ ನಿವಾಸ – ಉತ್ತಮ ಹ೦ಸ

 

ಮ೦ತ್ರಾಲಯ ನಿವಾಸ – ಉತ್ತಮ ಹ೦ಸ

ಸ೦ತಾಪ ಪರಿಹರಿಸಿ ಕೊಡು ಜನಕೆ ಲೇಸ        || ಪ ||

ಯತಿಗಳ ಶಿರೋರನ್ನ – ಯೋಗ ಸ೦ಪನ್ನ

ಕ್ಷಿತಿಯೊಳಗೆ ನಿನಗೆ ಸರಿ ಕಾಣೆನೊ

ನುತಿಸುವೆನು ಭಕ್ತಿಯಲಿ ಬಿಡದೆ

ಮುಕುತಿಯಲಿ ಸತತಾನ೦ದದಲಿಪ್ಪ     || ೧ ||

ಕಪಿಲ ತೀರ್ಥದಲ್ಲಿ – ಕರಣ ಶುದ್ಧಿಯಲ್ಲಿ

ತಪವ ಮಾಡುವ ಮೌನಿ – ಸೌಮ್ಯ ಜ್ಞಾನಿ

ಜಪಶೀಲ ಗುಣಾ೦ಬುಧಿ – ಪುಣ್ಯದ ಬುಧ್ಧಿ

ಕೃಪೆ ಮಾಡಿ ಕೊಡು ಗುರುವೆ – ಶಿಷ್ಯ ಸುರತರುವೆ        || ೨ ||

ತಮೋಗುಣ ಕಾರ್ಯ – ಪೋಗಲಾಡು ವ್ಯಾಪ್ತಿಯಾ

ಶಮೆ ದಮೆಯಲಿ ಉಳ್ಳ ಮಹಿಮೆಯೂ

ನಮಗೆ ಪೇಳುವ ವೇದ – ಬಲ್ಲ ವಿನೋದ

ಸುಮನ ಸುಗುಣವ ಮೆಚ್ಚಿ – ದುರ್ಮತಕೆ ಕಿಚ್ಚ        || ೩ ||

ಕಾಶಿ ಸೇತುವೆ ಮಧ್ಯ ಮೆರೆವ ಭೇದ ವಿ-

ದ್ಯ ಸಜ್ಜನಕೆ ತಿಳುಪೆ – ಮನಸು ನಿಲಿಪೆ

ಪೋಷಿಸುವೆ ಅವರ – ಅಟ್ಟುವ ಮಹದುರ

ದೋಷವ ಕಳೆವ೦ಥ – ವಿಮಲಖಲಶಾ೦ತ        || ೪ ||

ವರಹಜ ತೀರದಲಿದ್ದ – ಸುಪ್ರಸಿಧ್ಧ

ಮರುತಮತಾ೦ಬುಧಿ – ಸೋಮ ನಿಸ್ಸೀಮ

ಸರಸಿಜಪತಿ ನಮ್ಮ ವಿಜಯವಿಠ್ಠಲನ೦ಘ್ರಿ

ಸ್ಮರಿಸುವ ಸುಧೀ೦ದ್ರಸುತ – ರಾಘವೇ೦ದ್ರ         || ೫ ||


Mantralaya nivasa – uttama hamsa

Santapa pariharisi kodu janake lesa || pa ||


Yatigala siroranna – yoga sampanna

Kshitiyolage ninage sari kaneno

Nutisuvenu Baktiyali bidade

Mukutiyali satatanandadalippa –|| 1 ||


Kapila tirthadalli – karana Suddhiyalli

Tapava maduva mauni – saumya j~jani

Japasila gunambudhi – punyada budhdhi

Krupe madi kodu guruve – sishya surataruve || 2 ||


Tamoguna karya – pogaladu vyaptiya

Same dameyali ulla mahimeyu

Namage peluva veda – balla vinoda

Sumana sugunava mecci – durmatake kicca || 3 ||


Kasi setuve madhya mereva beda vi-

Dya sajjanake tilupe – manasu nilipe

Poshisuve avara – attuva mahadura

Doshava kalevantha – vimalakalasanta || 4 ||


Varahaja tiradalidda – suprasidhdha

Marutamatambudhi – soma nissima

Sarasijapati namma vijayaviththalanangri

Smarisuva sudhi0drasuta – ragavendra || 5 ||

No comments: