Sunday, December 6, 2020

ದೇವರಿಗೆ_ಅರ್ಪಿಸಬೇಕಾದ_ಪುಷ್ಪಗಳು

ದೇವರಿಗೆ_ಅರ್ಪಿಸುವ_ಪುಷ್ಪಗಳು -ಅಗ್ನಿ ಪುರಾಣ 

ಭಗವದ್ಗೀತೆಯಲ್ಲಿ ಪತ್ರಂ, ಪುಷ್ಪಂ, ಫಲಂ, ತೋಯಂ (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ 
ಹಾಗಾದರೆ ಭಗವಂತನಿಗೆ ಇಷ್ಟವಾದ ಪುಷ್ಪವಾವುದು? ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ, ಆದರೆ ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.

*ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ*
*ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l*
*ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ*
*ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll*

ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ ಅಹಿಂಸೆ.
ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು.
ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು.
ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡೆಣಿಸಬಾರದು.

ಎರಡನೆಯ ಪುಷ್ಪ ಇಂದ್ರಿಯನಿಗ್ರಹ.
ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾನ್ಯಾಯಗಳನ್ನು, ಧರ್ಮಾಧರ್ಮಾಗಳನ್ನು ನೋಡದೆ ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು;
ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನುವುದರ ಲಕ್ಷಣಗಳು.
ಇಂದ್ರಿಯ ನಿಗ್ರಹವು ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.

ಸರ್ವಭೂತ ದಯೆ ಮೂರನೆಯ ಪುಷ್ಪ. ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ – ಪ್ರಾಣಿ, ಪಕ್ಷಿ, ಕ್ರಿಮಿ ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.

ನಾಲ್ಕನೇ ಪುಷ್ಪವೇ ಕ್ಷಮಾಗುಣ. ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.


ಶಾಂತಿ ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗಬಾರದು.
ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು.

ಆರನೆಯ ಪುಷ್ಪವೆ ತಪಸ್ಸು. ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.

ಏಳನೆಯ ಪುಷ್ಪವೆ ಧ್ಯಾನ. ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.
ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರಬೇಕಾಗಿರುವುದು

ಎಂಟನೆಯ ಪುಷ್ಪವಾದ ಸತ್ಯ.
ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.


ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು ಆದರೆ ಪೂಜಾ ಸಮಯದಲ್ಲಿ ತಪ್ಪದೇಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. *ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು – ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ...ದೇವರ ಪೂಜೆಗೆ ನೈಸರ್ಗಿಕ ಹೂವು ಸಿಗದಿದ್ದರೂ ಪರವಾಗಿಲ್ಲ , ಈ ಹೂವುಗಳು ಅವಶ್ಯಕ ಬೇಕೆಬೇಕು..
🙏🙏🙏🙏🙏
ಕೃಷ್ಣಾರ್ಪಣಾಮಸ್ತು 

Monday, November 30, 2020

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ -ಪುರಂದರ ದಾಸ

 

ಕೃಷ್ಣ ಎನಬಾರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||ಅ|| ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||ನಿತ್ಯ ||


ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||೧|| ಮೇರೆ ತಪ್ಪಿ ಮಾತಾಡುವಾಗಲೊಮ್ಮೆ | ಕೃಷ್ಣಎನಬಾರದೆ || ದೊಡ್ಡ ||


ದಾರಿಯ ನಡೆದಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ||೨||


ಗಂಧವ ಪೂಸಿ ತಾಂಬೂಲವ ಮೆಲುವಾಗ | ಕೃಷ್ಣ ಎನಬಾರದೆ ತನ್ನ | ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ||೩||


ಪರಿಹಾಸ್ಯದ ಮಾತಾಡುತಲೊಮ್ಮೆ | ಕೃಷ್ಣ ಎನಬಾರದೆ | ಪರಿ ಪರಿ ಕೆಲಸದೊಳೊಂದು ಕೆಲಸವೆಂದು | ಕೃಷ್ಣ ಎನಬಾರದೆ ||೪||


ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ || ಬಹು || ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ||೫||


ನೀಗದಾಲೋಚನೆ ರೋಗೋಪದ್ರವದಲೊಮ್ಮೆ | ಕೃಷ್ಣ ಎನಬಾರದೆ || ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ | ಕೃಷ್ಣ ಎನಬಾರದೆ ||೬||


ದುರಿತರಾಶಿಗಳನು ತಂದು ಬಿಸುಡಲು ಕೃಷ್ಣ ಎನಬಾರದೆ | ಸದಾ || ಗರುಡವಾಹನ ಸಿರಿಪುರಂದರ ವಿಠಲನ್ನೇ | ಕೃಷ್ಣ ಎನಬಾರದೆ ||೭||


English transcript

krSNA ena bArade krSNana nenedare kaSTa ondiSTilla


narajanma bandAga nAlige iruvAga krSNA ena bAraDe


malagittu mai muridu eLuttalomme krSNA ena bArade nitya

sULitADuta maneyoLagAdaru omme krSNA ena bArade


mEre tappi mAtanADuvAgalomme krSNA ena bArade doDDa

dAriya naDevAga bhArava horuvAga krSNA ena bArade


gandhava pUsi tAmbUlava meluvAga krSNA ena bArade tanna

mandagamane kUDi sarasavADutalomme krSNA ena bArade


parihAsyada mAtanADutalomme krSNA ena bArade

paripari kelasadoLondu kelasavendu krSNA ena bArade


kandana bigidappi muddATutalomme krSNA ena bArade bahu

cenduLLa hAsige mEle kuLitomme krSNA ena bArade


nIgadAlOcane rOgOpadradalomme krSNA ena bArade oLLE

bOga paDEdu anurAgadindiruvAga krSNA ena bArade


durita rAshigaLanu taridu bisuDalu krSNA ena bArade sadA

garuDa vAhana siri purandara viTTalanne krSNA ene bArade



ತೇಲಿಸೋ ಇಲ್ಲ ಮುಳುಗಿಸೋ - ಪುರಂದರದಾಸರು / Teliso Illa Mulugiso- Purandara Daasa

 

ತೇಲಿಸೋ ಇಲ್ಲ ಮುಳುಗಿಸೋ ನಿನ್ನ 

ಕಾಲಿಗೆ ಬಿದ್ದೆನೊ ಪರಮ ಕೃಪಾಳೋ                       ।।ಪ।। 


ಸತಿಸುತ ಧನದಾಸೆ ಎಂಬಂತೆ ಮೋಹದಿ 

ಹಿತದಿಂದ ಅತಿನೊಂದು ಬೆಂಡಾದೆನೊ 

ಗತಿಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ -

ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ                        ।।೧।।


ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ 

ಶರಧಿಯೊಳಗೆ ಬಿದ್ದು ಮುಳುಗಿದೆನೊ 

ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ 

ಕರುಣಾಭಯವಿತ್ತು ಪಾಲಿಸೊ ಹರಿಯೆ                       ।।೨।।


ದೋಷವುಳ್ಳವ ನಾನು ಭಾಷೆಯುಳ್ಳವ ನೀನು 

ಮೋಸ ಹೋದೆನೋ ಭಕ್ತಿರಸವ ಬಿಟ್ಟು 

ಶೇಷಶಯನ ಶ್ರೀ ಪುರಂದರವಿಠಲನೆ 

ದಾಸರ ಸಂಗವಿತ್ತು ಪಾಲಿಸೊ ಹರಿಯೆ                       ।।೩।।


English translation

Teliso illa mulugiso ninna

Kalige biddeno parama krupalo ||pa||

Satisuta dhanadase embante mohadi

Hitadinda atinondu bendadeno

Gatikoduvara kane matiya paliso lakshmi –

Pati ninna caranada smaraneyittenage ||1||

Jare roga daridrya kasmalaventemba

Saradhiyolage biddu mulugideno

Sthiravalla dehavu nerenambide ninna

Karunabayavittu paliso hariye ||2||

Doshavullava nanu basheyullava ninu

Mosa hodeno Baktirasava bittu

Seshasayana sri purandaravithalane

Dasara sangavittu paliso hariye ||3||

Sunday, November 29, 2020

ಮoತ್ರಾಲಯ ನಿವಾಸ – ಉತ್ತಮ ಹ೦ಸ

 

ಮ೦ತ್ರಾಲಯ ನಿವಾಸ – ಉತ್ತಮ ಹ೦ಸ

ಸ೦ತಾಪ ಪರಿಹರಿಸಿ ಕೊಡು ಜನಕೆ ಲೇಸ        || ಪ ||

ಯತಿಗಳ ಶಿರೋರನ್ನ – ಯೋಗ ಸ೦ಪನ್ನ

ಕ್ಷಿತಿಯೊಳಗೆ ನಿನಗೆ ಸರಿ ಕಾಣೆನೊ

ನುತಿಸುವೆನು ಭಕ್ತಿಯಲಿ ಬಿಡದೆ

ಮುಕುತಿಯಲಿ ಸತತಾನ೦ದದಲಿಪ್ಪ     || ೧ ||

ಕಪಿಲ ತೀರ್ಥದಲ್ಲಿ – ಕರಣ ಶುದ್ಧಿಯಲ್ಲಿ

ತಪವ ಮಾಡುವ ಮೌನಿ – ಸೌಮ್ಯ ಜ್ಞಾನಿ

ಜಪಶೀಲ ಗುಣಾ೦ಬುಧಿ – ಪುಣ್ಯದ ಬುಧ್ಧಿ

ಕೃಪೆ ಮಾಡಿ ಕೊಡು ಗುರುವೆ – ಶಿಷ್ಯ ಸುರತರುವೆ        || ೨ ||

ತಮೋಗುಣ ಕಾರ್ಯ – ಪೋಗಲಾಡು ವ್ಯಾಪ್ತಿಯಾ

ಶಮೆ ದಮೆಯಲಿ ಉಳ್ಳ ಮಹಿಮೆಯೂ

ನಮಗೆ ಪೇಳುವ ವೇದ – ಬಲ್ಲ ವಿನೋದ

ಸುಮನ ಸುಗುಣವ ಮೆಚ್ಚಿ – ದುರ್ಮತಕೆ ಕಿಚ್ಚ        || ೩ ||

ಕಾಶಿ ಸೇತುವೆ ಮಧ್ಯ ಮೆರೆವ ಭೇದ ವಿ-

ದ್ಯ ಸಜ್ಜನಕೆ ತಿಳುಪೆ – ಮನಸು ನಿಲಿಪೆ

ಪೋಷಿಸುವೆ ಅವರ – ಅಟ್ಟುವ ಮಹದುರ

ದೋಷವ ಕಳೆವ೦ಥ – ವಿಮಲಖಲಶಾ೦ತ        || ೪ ||

ವರಹಜ ತೀರದಲಿದ್ದ – ಸುಪ್ರಸಿಧ್ಧ

ಮರುತಮತಾ೦ಬುಧಿ – ಸೋಮ ನಿಸ್ಸೀಮ

ಸರಸಿಜಪತಿ ನಮ್ಮ ವಿಜಯವಿಠ್ಠಲನ೦ಘ್ರಿ

ಸ್ಮರಿಸುವ ಸುಧೀ೦ದ್ರಸುತ – ರಾಘವೇ೦ದ್ರ         || ೫ ||


Mantralaya nivasa – uttama hamsa

Santapa pariharisi kodu janake lesa || pa ||


Yatigala siroranna – yoga sampanna

Kshitiyolage ninage sari kaneno

Nutisuvenu Baktiyali bidade

Mukutiyali satatanandadalippa –|| 1 ||


Kapila tirthadalli – karana Suddhiyalli

Tapava maduva mauni – saumya j~jani

Japasila gunambudhi – punyada budhdhi

Krupe madi kodu guruve – sishya surataruve || 2 ||


Tamoguna karya – pogaladu vyaptiya

Same dameyali ulla mahimeyu

Namage peluva veda – balla vinoda

Sumana sugunava mecci – durmatake kicca || 3 ||


Kasi setuve madhya mereva beda vi-

Dya sajjanake tilupe – manasu nilipe

Poshisuve avara – attuva mahadura

Doshava kalevantha – vimalakalasanta || 4 ||


Varahaja tiradalidda – suprasidhdha

Marutamatambudhi – soma nissima

Sarasijapati namma vijayaviththalanangri

Smarisuva sudhi0drasuta – ragavendra || 5 ||

ಕಂಡು ಕಂಡು ನೀ ಎನ್ನ ಕೈ ಬಿಡುವರೇ- ಪುರಂದರ ದಾಸ, Kandu Kandu Nee Enna kai bidvare: Purandara daasa


ರಚನೆ: ಪುರಂದರ ದಾಸ



ಕಂಡು ಕಂಡು ನೀ ಎನ್ನ ಕೈ ಬಿಡುವರೇ

ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ ||


ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ

ನಿಂದೆಯಲಿ ನೊಂದೆನೈ ನೀರಜಾಕ್ಷ

ತಂದೆತಾಯಿಯು ನೀನೆ ಬಂಧುಬಳಗವು ನೀನೆ

ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1||


ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ

ಎಣಿಸಲಾರದ ಭವದಿ ಕಡುನೊಂದೆ ನಾನು

ಸನಕಾದಿಮುನಿವಂದ್ಯ ವನಜಸಂಭವ ಜನಕ

ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||2||


ಭಕ್ತವತ್ಸಲನೆಂಬೊ ಬಿರುದು ಪೊತ್ತಾ ಮೇಲೆ

ಭಕ್ತರಾಧೀನನಾಗಿರಬೇಡವೆ

ಮುಕ್ತಿದಾಯಕ ನೀನು ಹೊನ್ನೂರುಪುರವಾಸ

ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||3||



English lyrics


kanDu kanDu nee enna kai biDuvare
punDarikaaksha shri purushOttam hari||

bandhugaLu yenagilla badukinali sukhavilla
nindeyali nondenai nirajaaksha
tandetaayiyu neene bandhubaLagavu neene
yendendigu ninna nanbidenO krishna||1||

kshanavondu yugavaagi truNakinta kaDeyaagi
yeNisalaarada bhavadi kaDunonde naanu
sanakaadi munivandya vanajasambhava janaka
phaNishaayi prahlaada golida shrikrishna||2||

bhaktavatsalanembo birudu potta mele
bhaktara adheenanaagirabeDave
muktidaayaka neenu honnuuru puravaasa
shaktaguru purandara viThala shrikrishna||3||



ಪಂಢರಾಪುರವೆಂಬ ದೊಡ್ಡ ನಗರ: ಪುರಂದರ ದಾಸರ ರಚನೆ – Pandarapuravembha Dodda Nagara- Purandara daasara Lyrics

ಪಂಢರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ಸಾಹುಕಾರ || ಪ ||

ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||

ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||

ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಆನಂದ ||೨||

ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||

ಪುರಂದರ ದಾಸರ ರಚನೆ 


English Lyrics

Pandharapuravemba dodda nagara
Alli vithobanemba sahukara || pa ||

Vithobaniruvadu naditira
Alli pandharibajane vyapara || apa ||

Tande nine tayi nine panduranga
Namma bandhu nine balaga nine panduranga
Baktara poshaka panduranga
Namma muktidayaka panduranga || 1 ||

Vithobanige priya tulasihara
Alli Bakta janara vyapara
Vithobanige priya bukkiya gandha
Alli chandrabaga snana balu ananda || 2 ||

Srihari viththala panduranga
Jaya hari viththala panduranga
Viththala viththala panduranga

Namma purandara viththala panduranga || 3 || 



Saturday, August 8, 2020

ಕೂಗಿದರು ಧ್ವನಿ ಕೇಳದೆ - ವಿಜಯ ದಾಸರು

 ಕೂಗಿದರು  ಧ್ವನಿ  ಕೇಳದೆ  

ಶಿರಾ  ಬಾಗಿದರು  ದಯ  ಬಾರದೆ  |ಪಲ್ಲವಿ |

ಭೋಗಿಶಯನ ಭುವನಾಧಿಪತೇ  ನಿನ್ನ  ಆಗಮನವೆಂದಿಗೆ  ಆಗುವುದೋ  ಪ್ರಭು  |ಅನು ಪಲ್ಲವಿ|


ಭಕ್ತರಿಗೊಲಿದವ  ನೀನು  ಖರೆ ಎನ್ನತ್ತ  ನೋಡುವದು ನೀನು ದೊರೆ 

ಚಿತ್ತವಧಾನ  ಪರಾಕು  ಮಹಾ  ಪ್ರಭು  ಎತ್ತಣ  ರಥವನು  ಎತ್ತಿ  ಬಾ ನೋಡು ದೊರೆ |ಚ೧ | 


ಸಿಂಧು  ಶಯನ  ಶೇಷಾದ್ರಿವರ  ಸಿರಿ  ಮಂದಿರ  ಭಕ್ತ  ಕುಟುಂಬಧರ: 

ಸುಂದರ  ಮೂರುತಿ  ಒಂದಿನ  ಸ್ವಪ್ನದಿ  ಬಂದು  ಪಾದದ್ವಯ  ಚಂದದಿ ತೋರಿಸೋ |ಚ೨ | 


ಕರುಣಾಶರಧಿ  ನೀನಲ್ಲವೇ  ಕೃಷ್ಣ....ಶರಣಾಗತರಿಗೆ  ದೊರೆಯಲ್ಲವೇ ಕೃಷ್ಣ

ಮೊರೆಹೊಕ್ಕವರಿಗೆ  ಮರೆಯಾಗುವರೇ  ಸರಿಯೇ  ಜಗದೊಳು ಕೃಷ್ಣಾ ವಿಜಯವಿಠ್ಠಲರೆಯ |ಚ೩  |  


ರಚನೆ : ವಿಜಯ ವಿಠ್ಠಲ ದಾಸ 



kUgidaru dhvani kELade shira bAgidaru daya bArade